ವಕ್ರರೇಖೆ
	ಸ್ವಾತಂತ್ರ್ಯಾಂಕ (ಡಿಗ್ರಿ ಆಫ್ ಫ್ರೀಡಮ್) 1 ಇರುವ ಯಾವುದೇ ಬಿಂದು ರೇಖಿಸುವ ಡೊಂಕುಗೆರೆ (ಕರ್ವ್). ಉದಾಹರಣೆಗೆ ವೃತ್ತ, ಶಂಕುಜಗಳು, ಉಲ್ಕಾಪಥ ಇತ್ಯಾದಿ. ವಕ್ರರೇಖೆಗಳು ಸಂವೃತವಾಗಿರಬಹುದು (ಕ್ಲೋಸ್ಡ್)-ವೃತ್ತ, ದೀರ್ಘವೃತ್ತಗಳಂತೆ; ವಿವೃತವಾಗಿರಬಹುದು (ಓಪನ್)-ಪರವಲಯ, ಅತಿಪರವಲಯಗಳ ಲ್ಲಿಯಂತೆ ಮೂರು ಆಯಾಮಗಳಲ್ಲಿಯೂ ಇರಬಹುದು.	
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ